ಶಾಲಾ ಶಿಕ್ಷಣ ಎಂದರೆ ಕೇವಲ ಪುಸ್ತಕಗಳಲ್ಲಿನ ಪಾಠವಲ್ಲ… ಅನುಭವದ ಮೂಲಕವೂ ಕಲಿಕೆ ಸಾಧ್ಯ ಎಂಬುದನ್ನು ಉಡುಪಿಯ ಪೋದಾರ್ ಪ್ರೆಪ್ ಶಾಲೆ ಮತ್ತೊಮ್ಮೆ ಸಾಬೀತುಪಡಿಸಿದೆ. “ಯೋಗ್ ಇನ್ ಮಡ್” ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ, ಮಣ್ಣಿನೊಂದಿಗೆ ಆಟವಾಡುತ್ತಾ ಯೋಗಾಭ್ಯಾಸ ಮಾಡುವ ಅಪರೂಪದ ಅವಕಾಶ ಕಲ್ಪಿಸಲಾಯಿತು. ಮಕ್ಕಳಷ್ಟೇ ಅಲ್ಲ, ಪೋಷಕರೂ ಈ ಸಂಭ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

ಮಕ್ಕಳ ಮುಖದಲ್ಲಿನ ನಗು… ಕೈಯಲ್ಲಿ ಮಣ್ಣು… ಮನದಲ್ಲಿ ಸಂಭ್ರಮ… ಇದೇ ಉಡುಪಿಯ ಪೋದಾರ್ ಪ್ರೆಪ್ ಶಾಲೆಯಲ್ಲಿ ನಡೆದ “ಯೋಗ್ ಇನ್ ಮಡ್” ಕಾರ್ಯಕ್ರಮದ ವಿಶೇಷತೆ.
ಪುಸ್ತಕದಾಚೆಗಿನ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಶಾಲೆಯು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳು ಮಣ್ಣಿನೊಂದಿಗೆ ಆಟವಾಡುತ್ತಾ ಯೋಗಾಭ್ಯಾಸ ನಡೆಸಿ ಸಂಭ್ರಮಿಸಿದರು.ಮಡ್ ಪ್ಲೇ, ಮುದ್ರಾಸ್ ವಿತ್ ಮಡ್ಡಿ ಹ್ಯಾಂಡ್ಸ್, ಮಡ್ ಬೇಕರಿ, ಮಡ್ ಆರ್ಟ್ ಕ್ರಿಯೇಷನ್, ಮಡ್ಡಿ ಫೀಟ್ ಸೇರಿದಂತೆ ಹಲವು ಚಟುವಟಿಕೆಗಳು ಮಕ್ಕಳನ್ನು ರಂಜಿಸಿದವು.
ಮಣ್ಣಿನ ಸ್ಪರ್ಶ, ಆಟದ ಉಲ್ಲಾಸ ಮತ್ತು ಯೋಗದ ಸಮತೋಲನ… ಈ ಮೂರರ ಸಂಗಮ ಮಕ್ಕಳಿಗೆ ಹೊಸ ಕಲಿಕೆಯ ಅನುಭವವನ್ನು ನೀಡಿತು.ಪ್ರಕೃತಿಯೊಂದಿಗೆ ನೇರ ಸಂಪರ್ಕ ಮಕ್ಕಳಲ್ಲಿ ಸೃಜನಶೀಲತೆ, ಕಲ್ಪನಾಶಕ್ತಿ, ಇಂದ್ರಿಯಾನುಭವ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತದೆ ಎಂಬುದು ಶಿಕ್ಷಕರ ಅಭಿಪ್ರಾಯ.

ಇಂತಹ ಅನುಭವಾತ್ಮಕ ಚಟುವಟಿಕೆಗಳು ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೂ ಪೂರಕವಾಗುತ್ತವೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಪೋಷಕರೂ ಮಕ್ಕಳೊಂದಿಗೆ ಮಣ್ಣಿನಲ್ಲಿ ಇಳಿದು ಆಟವಾಡಿ ಸಂಭ್ರಮಿಸಿದರು. ಮಕ್ಕಳೊಂದಿಗೆ ಕಳೆದ ಈ ವಿಶೇಷ ಕ್ಷಣಗಳು ಪೋಷಕರಿಗೂ ಸ್ಮರಣೀಯ ಅನುಭವವಾಗಿ ಉಳಿದವು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ನೇತ್ರಾ ಎಚ್, ಪೋದಾರ್ ಪ್ರೆಪ್ ಮುಖ್ಯೋಪಾಧ್ಯಾಯಿನಿ ಗೀತಾ ಲವೀನ್ ಪೂಜಾರಿ, ಆಡಳಿತಾಧಿಕಾರಿ ಹರೀಶ್ ನಾಯ್ಕ್ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಮಣ್ಣಿನೊಂದಿಗೆ ಆಟ, ಯೋಗದೊಂದಿಗೆ ಆರೋಗ್ಯ, ಅನುಭವದೊಂದಿಗೆ ಕಲಿಕೆ… ಈ ಮೂರು ಅಂಶಗಳನ್ನು ಒಂದೇ ವೇದಿಕೆಯಲ್ಲಿ ಮಕ್ಕಳಿಗೆ ಪರಿಚಯಿಸಿದ ಪೋದಾರ್ ಪ್ರೆಪ್ ಶಾಲೆಯ ‘ಯೋಗ್ ಇನ್ ಮಡ್’ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.”
ಆಟ, ಪ್ರಕೃತಿ ಮತ್ತು ಯೋಗವನ್ನು ಒಂದೇ ವೇದಿಕೆಯಲ್ಲಿ ಮಕ್ಕಳಿಗೆ ಪರಿಚಯಿಸಿದ ಈ ಕಾರ್ಯಕ್ರಮ, ಶಿಕ್ಷಣವನ್ನು ಇನ್ನಷ್ಟು ಆಸಕ್ತಿದಾಯಕ ಮತ್ತು ಅರ್ಥಪೂರ್ಣವಾಗಿಸುವ ಉತ್ತಮ ಪ್ರಯತ್ನ ಎಂದರೆ ತಪ್ಪಲ್ಲ. ಉಡುಪಿಯ ಪೋದಾರ್ ಪ್ರೆಪ್ ಶಾಲೆಯಲ್ಲಿ ನಡೆದ “ಯೋಗ್ ಇನ್ ಮಡ್” ಕಾರ್ಯಕ್ರಮ ಮಕ್ಕಳನ್ನು ಪ್ರಕೃತಿಯ ಮಡಿಲಿಗೆ ಕರೆತಂದು, ಮಣ್ಣಿನೊಂದಿಗೆ ಬೆರೆತು ಕಲಿಯುವ ಅಪರೂಪದ ಅನುಭವವನ್ನು ನೀಡಿತು.
