ಮತದಾರರ ಪಟ್ಟಿಯಿಂದ ಹೊರಗುಳಿದವರ ಮರುಸೇರ್ಪಡೆಗೆ ವಿಶೇಷ ಅಭಿಯಾನ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನ ಕೈಗೊಳ್ಳುವಂತೆ ಸೂಚಿಸಿದೆ. ಎಸ್‌ಐಆರ್ ಬಳಿಕ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳು ಕೈಬಿಡಲಾಗಿದೆ ಎಂಬ ವಿಚಾರದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚುನಾವಣಾ ಆಯೋಗವು ಈ ಕುರಿತು ನಿರ್ದೇಶನ […]
ಮೆನೊಪಾಸ್: ಹೆಣ್ಣಿನ ಬದುಕಿನ ಹೊಸ ಅಧ್ಯಾಯ; ಆರೋಗ್ಯದ ಕಾಳಜಿ ಇರಲಿ

ಮಹಿಳೆಯ ಬದುಕಿನಲ್ಲಿ ಬಾಲ್ಯದಿಂದ ಯೌವನ, ತಾಯ್ತನದವರೆಗೆ ದೇಹ ಹಲವು ಹಂತಗಳನ್ನು ದಾಟುತ್ತದೆ. ಅದೇ ರೀತಿ ಒಂದು ಹಂತದಲ್ಲಿ ಮುಟ್ಟಿನ ಅವಧಿ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ. ಇದೇ ಋತುಬಂಧ ಅಥವಾ ಮೆನೊಪಾಸ್. ಇದು ಕಾಯಿಲೆಯಲ್ಲ; ಮಹಿಳೆಯ ಜೀವನದಲ್ಲಿ ಸಹಜವಾಗಿ ಸಂಭವಿಸುವ ಜೈವಿಕ ಬದಲಾವಣೆ. ಆದರೆ ಈ ಹಂತದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನಲ್ ಬದಲಾವಣೆಗಳು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ 45ರಿಂದ 55 ವರ್ಷಗಳ ನಡುವಿನ ಅವಧಿಯಲ್ಲಿ ಋತುಬಂಧ ಸಂಭವಿಸುತ್ತದೆ. ಸತತ 12 ತಿಂಗಳ ಕಾಲ […]
ಕೋಡಿ ಕಡಲ ತೀರದಲ್ಲಿ ಬೂತಾಯಿ ಮೀನುಗಳ ರಾಶಿ; ಹೆಕ್ಕಿಕೊಳ್ಳಲು ಮುಗಿಬಿದ್ದ ಜನ!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕಡಲ ತೀರದಲ್ಲಿ ಶನಿವಾರ ಬೃಹತ್ ಪ್ರಮಾಣದಲ್ಲಿ ಬೂತಾಯಿ (ಸಾರ್ಡಿನ್) ಮೀನುಗಳು ಅಲೆಗಳೊಂದಿಗೆ ದಡಕ್ಕೆ ತೇಲಿ ಬಂದಿದ್ದು, ಕಡಲ ತೀರದಲ್ಲಿ ಮೀನಿನ ರಾಶಿಯೇ ಕಂಡುಬಂತು. ಕೋಡಿ ಕಡಲ ತೀರದ ನೂರಾರು ಮೀಟರ್ ಉದ್ದಕ್ಕೂ ಬೂತಾಯಿ ಮೀನುಗಳು ದಡದಲ್ಲಿ ಬಿದ್ದಿದ್ದವು. ಈ ಅಪರೂಪದ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಕಡಲ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉಚಿತವಾಗಿ ಮೀನುಗಳನ್ನು ಹೆಕ್ಕಿಕೊಂಡು ಹೋಗಲು ಮುಗಿಬಿದ್ದರು. ಚೀಲ, ಬುಟ್ಟಿ ಸೇರಿದಂತೆ ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ […]
ರಾಷ್ಟ್ರೀಯ ದಾಖಲೆ ಮುರಿದು ಬೆಳ್ಳಿ ಗೆದ್ದ ಸಾವನ್ ಬರ್ವಾಲ್

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತದ ಸಾವನ್ ಬರ್ವಾಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. 28 ವರ್ಷದ ಸಾವನ್ 2 ಗಂಟೆ 11 ನಿಮಿಷ 36 ಸೆಕೆಂಡ್‌ಗಳಲ್ಲಿ (2:11:36) ಓಟ ಪೂರ್ಣಗೊಳಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸ್ಪರ್ಧೆಯ ಕೊನೆಯ ಹಂತದವರೆಗೂ ತೀವ್ರ ಪೈಪೋಟಿ ನೀಡಿದ ಸಾವನ್, ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಜಪಾನ್‌ನ ಇಚಿಟಾಕಾ ಯಮಾಶಿತಾ 2:10:51 ಸಮಯದೊಂದಿಗೆ ಚಿನ್ನದ ಪದಕ ಗೆದ್ದರೆ, ಸಾವನ್ ದ್ವಿತೀಯ ಸ್ಥಾನ ಪಡೆದರು. […]
ವಾಹನದ ಫ್ಯಾನ್ಸಿ ನಂಬರ್ ಕ್ರೇಜ್: ಸಂಖ್ಯೆಯಲ್ಲೂ ಅದೃಷ್ಟ ಹುಡುಕುವವರಿಗೆ ಸಂಖ್ಯಾಶಾಸ್ತ್ರದ ಸೂತ್ರ

ಹೊಸ ವಾಹನ ಖರೀದಿಸುವಾಗ ಅದರ ಬಣ್ಣ, ಮಾದರಿ, ಬೆಲೆ, ಮೈಲೇಜ್ ಹಾಗೂ ಸೌಕರ್ಯಗಳಿಗೆ ನೀಡುವಷ್ಟೇ ಮಹತ್ವವನ್ನು ಕೆಲವರು ವಾಹನದ ನೋಂದಣಿ ಸಂಖ್ಯೆಗೆ ನೀಡುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ಅಥವಾ ಫ್ಯಾನ್ಸಿ ನಂಬರ್ ಪಡೆಯಲು ಹೆಚ್ಚುವರಿ ಹಣ ಪಾವತಿಸಲು ಸಿದ್ಧರಾಗಿರುವವರೂ ಇದ್ದಾರೆ. ಆದರೆ ಸಂಖ್ಯಾಶಾಸ್ತ್ರವನ್ನು ನಂಬುವವರ ಪ್ರಕಾರ, ಕಣ್ಣಿಗೆ ಆಕರ್ಷಕವಾಗಿ ಕಾಣುವ ಪ್ರತಿಯೊಂದು ಫ್ಯಾನ್ಸಿ ನಂಬರ್ ಎಲ್ಲರಿಗೂ ಒಂದೇ ರೀತಿಯಲ್ಲಿ ಅದೃಷ್ಟ ತರುವುದಿಲ್ಲ. ಸಂಖ್ಯಾಶಾಸ್ತ್ರದ ನಂಬಿಕೆಯಂತೆ, ವಾಹನದ ಸಂಖ್ಯೆಯನ್ನು ಆಯ್ಕೆ ಮಾಡುವಾಗ ಕೇವಲ ಕೊನೆಯ ಅಂಕೆಗಳನ್ನು ಗಮನಿಸುವುದು ಸಾಕಾಗುವುದಿಲ್ಲ. […]
ಶಾರ್ಜಾದಲ್ಲಿ ಕೊಲೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ ತವರಿಗೆ

ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಗೀಡಾಗಿದ್ದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಶುಕ್ರವಾರ ತವರಿಗೆ ತಲುಪಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮೃತದೇಹವನ್ನು ಕುಂದಾಪುರಕ್ಕೆ ತರಲಾಗಿದ್ದು, ಇಂದು ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತಿದೆ. ಸುಮಾರು ಎರಡು ತಿಂಗಳ ಹಿಂದೆ ಅಲ್ವಿನ್ ಪ್ರಕಾಶ್ ಕುಂದರ್ ಅವರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶಾರ್ಜಾದಲ್ಲಿ ಅವರ ಮೃತದೇಹವು ಒಂಬತ್ತು ತುಂಡುಗಳಾಗಿ ಅವರದೇ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹ ತವರಿಗೆ ಆಗಮಿಸಿದ […]
ಸೌಜನ್ಯ ಪ್ರಕರಣ: ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ

ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ಮರುತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ. ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅಧಿಕಾರಿಗಳಾದ ನಿಶಾ […]
ಕಿನ್ನಿಮುಲ್ಕಿ ಗಣೇಶನ ಅದ್ದೂರಿ ವಿಸರ್ಜನಾ ಶೋಭಾಯಾತ್ರೆ

ಉಡುಪಿ: ಕಿನ್ನಿಮೂಲ್ಕಿಯ ಗಣಪತಿ ಕಟ್ಟೆಯಲ್ಲಿ ಕಳೆದ ಹತ್ತು ದಿನಗಳಿಂದ ಕೃಷ್ಣಮೂರ್ತಿ ಆಚಾರ್ಯ ಅವರ ನೇತೃತ್ವದಲ್ಲಿ ಭಕ್ತಿಭಾವದಿಂದ ಪೂಜಿಸಲ್ಪಟ್ಟ ಗಣೇಶನಿಗೆ ಬುಧವಾರ ರಾತ್ರಿ ಭಾವಪೂರ್ಣ ವಿದಾಯ ನೀಡಲಾಯಿತು. ಭಕ್ತಿ, ಸಂಭ್ರಮ ಹಾಗೂ ವೈಭವದ ಸಮ್ಮಿಲನದೊಂದಿಗೆ ನಡೆದ ವಿಸರ್ಜನಾ ಶೋಭಾಯಾತ್ರೆ ಸಾವಿರಾರು ಭಕ್ತರ ಮನಸೂರೆಗೊಂಡಿತು. ರಾತ್ರಿ ಸುಮಾರು 7ರಿಂದ 7.30ರ ವೇಳೆಗೆ ಗಣೇಶನಿಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ, ವಿಶೇಷವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಮೊಳಗಿದ ‘ಗಣಪತಿ ಬಪ್ಪಾ ಮೋರೆಯಾ’ ಘೋಷಣೆಗಳು ವಾತಾವರಣವನ್ನು ಭಕ್ತಿಮಯಗೊಳಿಸಿದವು. […]
ಉಡುಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಚೆಸ್: ಸೆ.27ರಂದು ಕುಂದಾಪುರ, ಅ.4ರಂದು ಬೈಂದೂರು

ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಉಡುಪಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಲ್ಲಿ ಚೆಸ್ ಪಂದ್ಯಾಟ ಆಯೋಜಿಸಲಾಗಿದೆ.ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾರ್ಗದರ್ಶನದಲ್ಲಿ ಈ ಚೆಸ್ ಪಂದ್ಯಾಟ ನಡೆಯಲಿದೆ.ಸೆ. 27ರಂದುಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಾಗೂ ಅ. 4ರಂದು ಬೈಂದೂರಿನ ತ್ರಾಸಿ ಅಣ್ಣಪ್ಪಯ್ಯ ಸಭಾ ಭವನದಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರಗಳಲ್ಲೂ ಬೆಳಿಗ್ಗೆ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ ಎಂದು […]
ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ತಾಯ್ನಾಡಿಗೆ ಬಂದ ತುಳು ಕಲಾವಿದರಿಗೆ ಏರ್ ಪೋರ್ಟ್ ನಲ್ಲಿ ಆತ್ಮೀಯ ಸ್ವಾಗತ

72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ಸುಮಂತ್ ಭಟ್ ಹಾಗೂ ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಕುಂದಾಪುರ ಮೂಲದ ಡಾ.ಪ್ರದೀಪ್ ಕೆಂಚನೂರು ಅವರು ಬುಧವಾರ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಆತ್ಮೀಯರು, ಹಿತೈಷಿಗಳು ಸ್ವಾಗತ ಕೋರಿದರು. “ಮಿಥ್ಯಾ” ಕನ್ನಡ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ […]
