ಮತದಾರರ ಪಟ್ಟಿಯಿಂದ ಹೊರಗುಳಿದವರ ಮರುಸೇರ್ಪಡೆಗೆ ವಿಶೇಷ ಅಭಿಯಾನ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನ ಕೈಗೊಳ್ಳುವಂತೆ ಸೂಚಿಸಿದೆ. ಎಸ್‌ಐಆರ್‌ ಬಳಿಕ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳು ಕೈಬಿಡಲಾಗಿದೆ ಎಂಬ ವಿಚಾರದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚುನಾವಣಾ ಆಯೋಗವು ಈ ಕುರಿತು ನಿರ್ದೇಶನ […]

ಮೆನೊಪಾಸ್‌: ಹೆಣ್ಣಿನ ಬದುಕಿನ ಹೊಸ ಅಧ್ಯಾಯ; ಆರೋಗ್ಯದ ಕಾಳಜಿ ಇರಲಿ

ಮಹಿಳೆಯ ಬದುಕಿನಲ್ಲಿ ಬಾಲ್ಯದಿಂದ ಯೌವನ, ತಾಯ್ತನದವರೆಗೆ ದೇಹ ಹಲವು ಹಂತಗಳನ್ನು ದಾಟುತ್ತದೆ. ಅದೇ ರೀತಿ ಒಂದು ಹಂತದಲ್ಲಿ ಮುಟ್ಟಿನ ಅವಧಿ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ. ಇದೇ ಋತುಬಂಧ ಅಥವಾ ಮೆನೊಪಾಸ್‌. ಇದು ಕಾಯಿಲೆಯಲ್ಲ; ಮಹಿಳೆಯ ಜೀವನದಲ್ಲಿ ಸಹಜವಾಗಿ ಸಂಭವಿಸುವ ಜೈವಿಕ ಬದಲಾವಣೆ. ಆದರೆ ಈ ಹಂತದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನಲ್‌ ಬದಲಾವಣೆಗಳು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ 45ರಿಂದ 55 ವರ್ಷಗಳ ನಡುವಿನ ಅವಧಿಯಲ್ಲಿ ಋತುಬಂಧ ಸಂಭವಿಸುತ್ತದೆ. ಸತತ 12 ತಿಂಗಳ ಕಾಲ […]