ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ತಾಯ್ನಾಡಿಗೆ ಬಂದ ತುಳು ಕಲಾವಿದರಿಗೆ ಏರ್ ಪೋರ್ಟ್ ನಲ್ಲಿ ಆತ್ಮೀಯ ಸ್ವಾಗತ

72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ಸುಮಂತ್ ಭಟ್ ಹಾಗೂ ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಕುಂದಾಪುರ ಮೂಲದ ಡಾ.ಪ್ರದೀಪ್ ಕೆಂಚನೂರು ಅವರು ಬುಧವಾರ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಆತ್ಮೀಯರು, ಹಿತೈಷಿಗಳು ಸ್ವಾಗತ ಕೋರಿದರು. “ಮಿಥ್ಯಾ” ಕನ್ನಡ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ […]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಮಿಥ್ಯ’ಗೆ ಮೂರು ಗೌರವ, ‘ಇಂಬು’ಗೆ ತುಳು ಚಿತ್ರದ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಒಟ್ಟು 92 ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಕನ್ನಡ ಹಾಗೂ ತುಳು ಚಿತ್ರರಂಗದ ಹಲವು ಪ್ರತಿಭೆಗಳನ್ನು ರಾಷ್ಟ್ರಪತಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು. ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಪಿಕ್ಚರ್ಸ್’ ಹಾಗೂ ‘ಕೆಆರ್‌ಜಿ ಸ್ಟುಡಿಯೋಸ್’ ಜಂಟಿ ನಿರ್ಮಾಣದ ‘ಮಿಥ್ಯ’ ಚಿತ್ರವು ಮೂರು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿತು. ಸುಮಂತ್ […]

ಬಾಲ್ಯದ ಕ್ಯಾನ್ಸರ್‌ ಚಿಕಿತ್ಸೆಗೆ ನಿಧಿ ಸಂಗ್ರಹ: ‘ಡ್ರೀಮ್ಸ್ ಆನ್ ವೀಲ್ಸ್ 2.0’ ಬೈಕ್‌ ಯಾತ್ರೆ

ಬಾಲ್ಯದ ಕ್ಯಾನ್ಸರ್‌ ಕುರಿತು ಅರಿವು ಮೂಡಿಸುವುದರ ಜೊತೆಗೆ ಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಹಿರಿಯ ಪತ್ರಕರ್ತ ಹಾಗೂ ಶೈಕ್ಷಣಿಕ ಹೋರಾಟಗಾರ ಶ್ರೀನಿವಾಸನ್ ನಂದಗೋಪಾಲ್ ಅವರು ‘ಡ್ರೀಮ್ಸ್ ಆನ್ ವೀಲ್ಸ್ 2.0’ ರಾಷ್ಟ್ರಮಟ್ಟದ ಬೈಕ್‌ ಯಾತ್ರೆ ಕೈಗೊಳ್ಳಲಿದ್ದಾರೆ. ಸೆ.26ರಂದು ಮಂಗಳೂರಿನಿಂದ ಆರಂಭವಾಗಲಿರುವ ಈ ಏಕಾಂಗಿಯ ಬೈಕ್‌ ಯಾತ್ರೆ ಒಂದು ವರ್ಷದ ಅವಧಿಯಲ್ಲಿ ದೇಶದ 30ಕ್ಕೂ ಹೆಚ್ಚು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ 30,000 ಕಿ.ಮೀ.ಗೂ ಅಧಿಕ ದೂರ ಸಾಗಲಿದೆ. ತಿರುವನಂತಪುರಂ, ಚೆನ್ನೈ, ಹೈದರಾಬಾದ್, ಒಡಿಶಾ, ಪಶ್ಚಿಮ ಬಂಗಾಳ, […]

ಕರಾವಳಿ ಕಥೆಗೆ ಹೊಸ ಸ್ಪರ್ಶ: ನವೆಂಬರ್‌ನಲ್ಲಿ ಸೂಚನ್ ಶೆಟ್ಟಿ ನಿರ್ದೇಶನದ ‘ಗಾಡ್ ಪ್ರಾಮಿಸ್’ ರಿಲೀಸ್

ಕರಾವಳಿಯ ಮಣ್ಣಿನಲ್ಲಿ ಹುಟ್ಟಿದ ಕಥೆಯೊಂದು ಇದೀಗ ಬೆಳ್ಳಿತೆರೆಯ ಮೇಲೆ ತನ್ನದೇ ಹೆಜ್ಜೆ ಗುರುತು ಮೂಡಿಸಲು ಸಿದ್ಧವಾಗಿದೆ. ‘ಗಾಡ್ ಪ್ರಾಮಿಸ್’ ಮೂಲಕ ಒಂದು ಹೊಸ ತಂಡದ ಹೊಸ ಕನಸೊಂದು ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಕರಾವಳಿಯ ಮಣ್ಣಿಗೆ ತನ್ನದೇ ಆದ ಕಥೆಗಳಿವೆ. ಇಲ್ಲಿನ ಬದುಕಿಗೆ ತನ್ನದೇ ಆದ ಬಣ್ಣವಿದೆ. ಸಂಬಂಧಗಳಿಗೆ ಭಾವನೆಗಳಿವೆ. ಸಂಸ್ಕೃತಿಗೆ ತನ್ನದೇ ಆದ ಸೊಗಡಿದೆ. ಈ ಎಲ್ಲವನ್ನೂ ಬೆಳ್ಳಿತೆರೆಗೆ ತರುವ ಪ್ರಯತ್ನಗಳು ನಡೆದಾಗಲೆಲ್ಲಾ ಕನ್ನಡ ಸಿನಿರಂಗದಲ್ಲಿ ಹೊಸ ಕುತೂಹಲ ಹುಟ್ಟುತ್ತದೆ. ಇದೀಗ ಅಂತಹದ್ದೇ ಒಂದು ಹೊಸ […]

AI ಯುಗದ ಯುವಕನ ಕಥೆ ‘ಲಂಬೋದರ 2.0’: ಬೆಳ್ಳಿತೆರೆಗೆ ಜಿಯಾ ರೋಬೋಟ್ ಎಂಟ್ರಿ

ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಲಂಬೋದರ 2.0’ ಚಿತ್ರ ಹೊಸತನದ ಕಥಾಹಂದರದೊಂದಿಗೆ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಬೆಂಗಳೂರಿನ ಮಚಾನಿ ರೋಬೋಟಿಕ್ಸ್ ಅಭಿವೃದ್ಧಿಪಡಿಸಿರುವ ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಸೈನ್ಸ್‌ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಬೆಂಗಳೂರಿನ ಯುವಕನೊಬ್ಬನ ಬದುಕಿನ ಸುತ್ತ ಕಥೆ ಸಾಗಲಿದ್ದು, ಆತನ ಜೀವನದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ಸಿನಿಮಾ ಅನಾವರಣಗೊಳಿಸಲಿದೆ. […]