ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ 36.29 ಲಕ್ಷ ರೂ. ಮೌಲ್ಯದ 73 ಕೆಜಿ ಗಾಂಜಾ ನಾಶ

ಮಾದಕ ವಸ್ತುಗಳ ಅಕ್ರಮ ಸಾಗಣೆ ಹಾಗೂ ಮಾರಾಟದ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದ ಭಾಗವಾಗಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 73 ಕೆಜಿ 92 ಗ್ರಾಂ 828 ಮಿಲಿಗ್ರಾಂ ತೂಕದ, ಅಂದಾಜು 36,29,550 ರೂ. ಮೌಲ್ಯದ ಗಾಂಜಾವನ್ನು ಕಾನೂನುಬದ್ಧವಾಗಿ ನಾಶಪಡಿಸಲಾಯಿತು. ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ.ಲಿ. […]

ಉಡುಪಿ ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ಪ್ರತಿಷ್ಠಿತ DG & IGP Commendation Disc ಪ್ರಶಸ್ತಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2025–2026ನೇ ಸಾಲಿನ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಕಮೆಂಡೇಶನ್ ಡಿಸ್ಕ್ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯ ಎ.ಎಸೈ ರಾಜೇಶ್ ಪಿ., ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ARSI ಸುಧಾಕರ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಪ್ರಭು ಹಾಗೂ ಉಡುಪಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಶಿವಕುಮಾರ್ ಎಚ್. ಎಂ. ಪ್ರಶ್ಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ತವ್ಯದ ಮೇಲಿನ ನಿಷ್ಠೆ, […]

ಉಡುಪಿಯ ಕುವರಿ ಸುಹಾನಿಗೆ “ಮಿಸ್ಸಿ ಕರ್ನಾಟಕ 2026” ಕಿರೀಟ

ಸಿಜ್ಲಿಂಗ್ ಗೈಸ್ ಫ್ಯಾಷನ್ ಮ್ಯಾನೇಜ್‌ಮೆಂಟ್ ಮತ್ತು ಹೆವೆನ್ ರೋಸ್ ಜಂಟಿಯಾಗಿ ಆಯೋಜಿಸಿದ ‘ಮಿಸ್ಸಿ, ಟೀನ್, ಮಿಸ್ಟರ್ ಮತ್ತು ಮಿಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಸುಹಾನಿ ಕುಕ್ಕಿಕಟ್ಟೆ ಅವರು “ಮಿಸ್ಸಿ ಕರ್ನಾಟಕ 2026” ಕಿರೀಟವನ್ನು ಮುಡಿಗೇರಿಸಿಕೊಂಡರು.  ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ನಡೆದ  5 ರಿಂದ 12 ವರ್ಷದ ಒಳಗಿನ ವಿಭಾಗದಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಉಡುಪಿ ಭಾಗಗಳಿಂದ ಒಟ್ಟು 14 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು […]