ವಾಹನದ ಫ್ಯಾನ್ಸಿ ನಂಬರ್ ಕ್ರೇಜ್: ಸಂಖ್ಯೆಯಲ್ಲೂ ಅದೃಷ್ಟ ಹುಡುಕುವವರಿಗೆ ಸಂಖ್ಯಾಶಾಸ್ತ್ರದ ಸೂತ್ರ

ಹೊಸ ವಾಹನ ಖರೀದಿಸುವಾಗ ಅದರ ಬಣ್ಣ, ಮಾದರಿ, ಬೆಲೆ, ಮೈಲೇಜ್ ಹಾಗೂ ಸೌಕರ್ಯಗಳಿಗೆ ನೀಡುವಷ್ಟೇ ಮಹತ್ವವನ್ನು ಕೆಲವರು ವಾಹನದ ನೋಂದಣಿ ಸಂಖ್ಯೆಗೆ ನೀಡುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ಅಥವಾ ಫ್ಯಾನ್ಸಿ ನಂಬರ್ ಪಡೆಯಲು ಹೆಚ್ಚುವರಿ ಹಣ ಪಾವತಿಸಲು ಸಿದ್ಧರಾಗಿರುವವರೂ ಇದ್ದಾರೆ. ಆದರೆ ಸಂಖ್ಯಾಶಾಸ್ತ್ರವನ್ನು ನಂಬುವವರ ಪ್ರಕಾರ, ಕಣ್ಣಿಗೆ ಆಕರ್ಷಕವಾಗಿ ಕಾಣುವ ಪ್ರತಿಯೊಂದು ಫ್ಯಾನ್ಸಿ ನಂಬರ್ ಎಲ್ಲರಿಗೂ ಒಂದೇ ರೀತಿಯಲ್ಲಿ ಅದೃಷ್ಟ ತರುವುದಿಲ್ಲ. ಸಂಖ್ಯಾಶಾಸ್ತ್ರದ ನಂಬಿಕೆಯಂತೆ, ವಾಹನದ ಸಂಖ್ಯೆಯನ್ನು ಆಯ್ಕೆ ಮಾಡುವಾಗ ಕೇವಲ ಕೊನೆಯ ಅಂಕೆಗಳನ್ನು ಗಮನಿಸುವುದು ಸಾಕಾಗುವುದಿಲ್ಲ. […]

ಶಾರ್ಜಾದಲ್ಲಿ ಕೊಲೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ ತವರಿಗೆ

ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಗೀಡಾಗಿದ್ದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಶುಕ್ರವಾರ ತವರಿಗೆ ತಲುಪಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮೃತದೇಹವನ್ನು ಕುಂದಾಪುರಕ್ಕೆ ತರಲಾಗಿದ್ದು, ಇಂದು ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತಿದೆ. ಸುಮಾರು ಎರಡು ತಿಂಗಳ ಹಿಂದೆ ಅಲ್ವಿನ್ ಪ್ರಕಾಶ್ ಕುಂದರ್ ಅವರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶಾರ್ಜಾದಲ್ಲಿ ಅವರ ಮೃತದೇಹವು ಒಂಬತ್ತು ತುಂಡುಗಳಾಗಿ ಅವರದೇ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹ ತವರಿಗೆ ಆಗಮಿಸಿದ […]